ಯೇಸು ಕ್ರಿಸ್ತನ ಪ್ರಕಟನೆಯು ಆತನು ಬೇಗನೆ ಸಂಭವಿಸತಕ್ಕವುಗಳನ್ನು ತನ್ನ ಸೇವಕರಿಗೆ ತೋರಿಸುವದಕ್ಕಾಗಿ ದೇವರು ಈ ಪ್ರಕಟನೆ ಯನ್ನು ಆತನಿಗೆ ಕೊಟ್ಟನು; ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಅದನ್ನು ತನ್ನ ಸೇವಕನಾದ ಯೋಹಾನನಿಗೆ ಸೂಚಿಸಿದ
ಯೋಹಾನನು ಆಸ್ಯದಲ್ಲಿರುವ ಏಳು ಸಭೆಗ ಳಿಗೆ--ಇರುವಾತನೂ ಇದ್ದಾತನೂ ಬರುವಾತನೂ ಆಗಿರುವಾತನಿಂದಲೂ ಆತನ ಸಿಂಹಾಸನದ ಮುಂದಿ ರುವ ಏಳು ಆತ್ಮಗಳಿಂದಲೂ ನಂಬತಕ್ಕ ಸಾಕ್ಷಿಯೂ ಸತ್ತವರೊಳಗಿಂದ ಮೊದಲು ಎದ್ದು ಬಂದಾತನೂ ಭೂರಾಜರ ಪ್ರಭುವೂ ಆಗಿರುವ ಯೇಸು ಕ್ರಿಸ್ತ ನಿಂದ
ಇಗೋ ಆತನು ಮೇಘಗ ಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು; ಆತನನ್ನು ಇರಿದವರು ಸಹ ಕಾಣುವರು; ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ಗೋಳಾಡುವರು. ಹೌದು, ಹಾಗೆಯೇ ಆಗುವದು. ಆಮೆನ್.
ನಿಮ್ಮ ಸಹೋದರನೂ ಯೇಸು ಕ್ರಿಸ್ತನ ನಿಮಿತ್ತ ಸಂಕಟದಲ್ಲಿ ರಾಜ್ಯದಲ್ಲಿ ಮತ್ತು ತಾಳ್ಮೆಯಲ್ಲಿ ಜೊತೆ ಗಾರನೂ ಆಗಿರುವ ಯೋಹಾನನೆಂಬ ನಾನು ದೇವರ ವಾಕ್ಯಕ್ಕೋಸ್ಕರವೂ ಯೇಸು ಕ್ರಿಸ್ತನ ವಿಷಯವಾದ ಸಾಕ್ಷೀಗೋಸ್ಕರವೂ ಪತ್ಮೊಸ್ ಎಂದು ಕರೆಯಲ್ಪಟ್ಟ ದ್ವೀಪದಲ್ಲಿದ್ದೆನು.
ಅದು--ನಾನೇ ಅಲ್ಫಾವೂ ಓಮೆಗವೂ ಮೊದಲನೆಯವನೂ ಕಡೆ ಯವನೂ ಆಗಿದ್ದೇನೆ; ನೀನು ನೋಡುವದನ್ನೂ ಪುಸ್ತಕದಲ್ಲಿ ಬರೆದು ಆಸ್ಯದಲ್ಲಿನ ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ ಎಂಬ ಈ ಏಳು ಸಭೆಗಳಿಗೆ ಅದನ್ನು ಕಳುಹಿಸಬೇಕೆಂದು ಹೇಳಿತು.
ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಮರ್ಮವನ್ನು ಬರೆ. ಆ ಏಳು ನಕ್ಷತ್ರಗಳು ಆ ಏಳು ಸಭೆಗಳ ದೂತರು; ನೀನು ಕಂಡ ಆ ಏಳು ದೀಪಸ್ತಂಭಗಳು ಆ ಏಳು ಸಭೆಗಳು ಎಂದು ಹೇಳಿದನು.